Skip to main content

ಶ್ರೀ ದಕ್ಷಿಣ ಕಾಳಿ ಮಹಾತ್ಮೆ

ಶ್ರೀ ದಕ್ಷಿಣ ಕಾಳಿ ಮಹಾತ್ಮೆ( ದಶಮಹಾ ವಿದ್ಯೆಯ ಮೊದಲ ಸಾಧನೆ)

ದೇವಾದಿ ದೇವತೆಗಳೆಲ್ಲರೂ ಸೇರಿ ಕೈಲಾಸದಲ್ಲಿ ಪಾರ್ವತಿ ಪರಮೇಶ್ವರರನ್ನು ಸ್ತುತಿಸುತ್ತಿದ್ದರು. ತುಂಬುರು ನಾರದರು ವೀಣೆಯನ್ನು ನುಡಿಸುತ್ತಾ  ನಂದಿಯು ಮೃದಂಗ ವಾದ್ಯ ನುಡಿಸಿ ತಿಲೊತ ಮಾದಿಗಳು ನರ್ತನ ಮಾಡುತ್ತಾ ಸನಕಾದಿ ಋಷಿಗಳು ವೇದ ಮಂತ್ರ ಪಾರಾಯಣ ಮಾಡುತ್ತಾ ರಾಕ್ಷಸರು ಪರಶಿವನ ಮಂತ್ರವನ್ನು ಜಪಿಸುತ್ತ ಅಷ್ಟದಿಕ್ಪಾಲಕರು ಸ್ವಾಮಿಯ ಸೇವೆಯನ್ನು ಯಥೋಚಿತವಾಗಿ ಮಾಡುತ್ತಾ ಬೃಂಗಿ ರಿಟಾಧಿಗಳು ಸುಶ್ರಾವ್ಯವಾಗಿ ಸಾಮಗಾನ ಮಾಡುತ್ತಿದ್ದರು .
ಅಂತಹ ವಿಜ್ರಂಭನೆ ನಡೆಯುತ್ತಿರುವಾಗ ಭೂಲೋಕದಿಂದ ಬಂದ ನಾರದರು ಕೈಲಾಸದಲ್ಲಿ ಶಿವನನ್ನು ಕಂಡು ವಂದಿಸಿದರು. ಶಿವನು ಅವರಿಗೆ ಅಘ್ಯಾದಿಗಳನ್ನು ಕೊಟ್ಟು ಆಸನದಲ್ಲಿ ಕೂರಿಸಿ ಸತ್ಕರಿಸಿದನು ಸಂತುಷ್ಟರಾದ ನಾರದರು ಪರಶಿವನನ್ನು ಕೊಂಡಾಡಿದರು ಅವರು ಸ್ವಲ್ಪ ಅಸಮಾಧಾನ ತೋರಿದ್ಂತಿದ್ದರು .
ಆಗ ಶಿವನು ನಾರದನನ್ನು ಕುರಿತು ಬ್ರಹ್ಮರ್ಷಿಗಳೆ ತಾವು ಈ ರೀತಿ ಅಸಮಾಧಾನ ಪಟ್ಟಿರುವುದಕ್ಕೆ ಕಾರಣವೇನು ಎಂದು ಒತ್ತಾಯಿಸಿ ಕೇಳಿದನು. ಆಗ ನಾರದರು ಸ್ವಲ್ಪ ತಲೆ ಬಗ್ಗಿಸಿ ದೇವ ದೇವ ಪ್ರಪಂಚದಲ್ಲೆಲ್ಲಾ ಇನ್ನ ಕೀರ್ತಿ ಭಜನೆ ಆರಾಧನೆಗಳು ವಿಶೇಷವಾಗಿ ನಡೆಯುತ್ತಿದೆ ನಾನು ಕೂಡ ಅದನ್ನು ನೋಡಿ ತೃಪ್ತಿ ಪಟ್ಟೆನು. ಅಂತಹ ಸಮಯದಲ್ಲಿ ನಿಮ್ಮನ್ನೇ ದಿಕ್ಕರಿಸಿದ ಒಂದು ಅವಕಾಶವನ್ನು ನಾನು ನೋಡಿ ಬಂದೆನು ಎಂದು ಹೇಳಿ ತಲೆ ತಗ್ಗಿಸಿದರು.
ಶಿವನು ಬಲತ್ಕಾರವಾಗಿ ನಾರದರನ್ನು ಕುರಿತು ಹೇಳಿದನು. ತ್ರಿಲೋಕ ಸಂಚಾರಿ ಗಳೇ ಲೋಕದಲ್ಲಿ ನಡೆಯುವ ಎಲ್ಲಾ ವಿಚಾರಗಳನ್ನು ಬಲ್ಲ ನೀವು ವಿಚಾರವನ್ನು ಹೀಗೆ ಅರ್ಧದಲ್ಲಿ ನಿಲ್ಲಿಸಿದರೆ ನಮಗೆ ಹೇಗೆ ಅರ್ಥವಾಗಬೇಕು. ಆದಕಾರಣ ವಿಚಾರವನ್ನು ಇದ್ದದ್ದು ಇದ್ದ ಹಾಗೆಯೇ ಹೇಳಬೇಕೆಂದು ಕೋರಿದನು. ನಾರದರು ಆದಿಶಕ್ತಿಯ ಕಡೆ ನೋಡಿ ಹೇಗೆ ಹೇಳಲಿ ತಾಯಿದು ನಿಮ್ಮ ಸಂಸಾರದ ವಿಷಯವಾಗಿದೆ ಎಂದರು. ಆದಿಶಕ್ತಿಯು ಪ್ರೀತಳಾಗಿ ನಾರದರಲ್ಲಿ ಗೆ ಬಂದು ಏನು ವಿಚಾರವಿದ್ದರೂ ನಿಸ್ಸಂಕೋಚವಾಗಿ ಹೇಳು ನಮ್ಮ ಸಂಸಾರದ ವಿಷಯವಾದರೂ ಪರವಾಗಿಲ್ಲ ಎಂದು ಹೇಳಿದಳು.
ತಾಯಿಯೇ ಅನುಜ್ಞೆ ಪಡೆದ ನಾರದರು ಅಮ್ಮ ಮೂರು ಲೋಕಗಳಿಗೂ ಒಡೆಯನಾದ ಶಿವನನ್ನು ಮರೆತು ಯಜ್ಞ 1 ಅದ್ದೂರಿಯಾಗಿ ಭೂಲೋಕದಲ್ಲಿ ನಡೆಯುತ್ತಿದೆ. ಯಾಗವನ್ನು ಈ ಯಾಗವನ್ನು ನಿಮ್ಮ ತಂದೆಯವರಾದ ದಕ್ಷಬ್ರಹ್ಮನ ಮಾಡುತ್ತಿದ್ದಾನೆ. ವಸಿಷ್ಠಾದಿ ಮಹರ್ಷಿಗಳು ಯಜ್ಞವನ್ನು ಮಾಡುತ್ತಿರುವವರು. ಇನ್ನು ಅನೇಕ ರಾಕ್ಷಸ ಕುಲದವರು ಯಕ್ಷರು ಕಿಂಪುರುಷರು ನಾಗ ಕುಲಗಳು ಗಂದರ್ವ ಕುಲದವರು ಪಿತೃ ಕುಲದವರೂ ವಿಷ್ಣು ಗಣ ದವರು ಇನ್ನೂ ಅನೇಕ ದೇವಾನುದೇವತೆಗಳು ಯಜ್ಞಕ್ಕೆ ವಿಜ್ರಂಭಣೆಯಿಂದ ಹೋಗುತ್ತಿದ್ದರು ಎಲ್ಲರ ಬಾಯಿಯಲ್ಲಿಯೂ ಆ ಯಜ್ಞದ ವಿಚಾರವೇ ಪ್ರಚಲಿತವಾಗುತ್ತಿತ್ತು. ಇದನ್ನು ಕೇಳಿ ಬೆರಗಾಗಿ ನಾನು ಕೂಡ ಆ ಯಾಗಶಾಲೆಗೆ ಅತಿಥಿಯಾಗಿ ಹೋಗಿದ್ದೆ ಒಳ್ಳೆಯ ಸತ್ಕಾರ ದಕ್ಷಬ್ರಹ್ಮನ ವಿನಯ ಗುಣಸಂಪನ್ನತೆ ನೋಡಿ ನಾನು ಪರವಶನಾದೆ ಅನಂತರ ದಕ್ಷನನ್ನು ಕುರಿತು ಅಯ್ಯಾ ರಾಜ ನೀನು ಮಾಡುತ್ತಿರುವ ಈ ಮಹಾಯಾಗದ ಹೆಸರೇನು ಇದರ ಮಹಿಮೆ ಏನು ಇದಕ್ಕೆ ಯಾರು ಸ್ವಾಹಾಕಾರ ಅರ್ಹರು ಎಂದು ಕೇಳಿದೆ.

ಆಗ ದಕ್ಷನು ಇದು ದಶ ಪೂರ್ಣ ಮಹಾಯಾಗ ಕೋರಿದ ಇಷ್ಟಾರ್ಥಗಳನ್ನು ಕೊಡುವುದು ಮಹಾವಿಷ್ಣು ಪ್ರಧಾನ ಕರ್ತನು ಎಂದು ಹೇಳಿದನು ಅಂತರವನ್ನು ತಿಂಗಳುಗಳ ಮಾಡಿದ್ದನ್ನು ಕಣ್ಣಾರೆ ಕಂಡೆ ಸಕಲ ದೇವತಾ  ಹಾಗೂ ಸೃಷ್ಟಿಯಲ್ಲಿನ ಎಲ್ಲಾ ಜೀವ ಚರ-ಸ್ಥಿರದಿಗಳಿಗೂ ಆಹುತಿಯನ್ನು ಕೊಡುತ್ತಿದ್ದನು ಅದರಂತೆಯೇ ಆಯಾ ದೇವತೆಗಳು ತಮ್ಮ ಹವಿಸ್ಸನ್ನು ಯಜ್ಞೇಶ್ವರನ ಮೂಲಕ ಸ್ವೀಕರಿಸುತ್ತಿದ್ದರು ಆದರೆ ಒಂದು ದಿನವೂ ಶಿವನಿಗೆ ಆಹುತಿ ನೀಡಲಿಲ್ಲ. ಆಗ ನಾನು ದಕ್ಷನನ್ನು ಕುರಿತು ಅಯ್ಯಾ ಎಲ್ಲಾ ದೇವತೆಗಳಿಗೂ ಹವಿಸ್ಸು ಕೊಟ್ಟು ಸತ್ಕರಿಸದ ನನಗೆ ಬಹಳ ಸಂತೋಷವಾಯಿತು. ಆದರೆ ಶಿವನಿಗೆ ಆಹುತಿ ಸಲ್ಲಿಸದಿರುವುದರಿಂದ ನಿನ್ನ ಯಾಗ ವಿಫಲವಾಯಿತಲ್ಲವೇ ಎಂದು ಕೇಳಿದೆನು.
ಆಗ ಆತನು ನನ್ನನ್ನು ಸಮಾಧಾನ ಪಡಿಸಿ ಶಿವನು ಭಸ್ಮಧಾರಿ ಹಾಗೂ ಸ್ಮಶಾನವಾಸಿ ಅಂತವರಿಗೆ ಹವಿಸ್ಸು ಕೊಡಲು ಇಂತಹ ಪುಣ್ಯ ಯಾಗಗಳಲ್ಲಿ ಅವಕಾಶವಿಲ್ಲ. ಇನ್ನು ದಾಕ್ಷಾಯಿಣಿಯು ನನ್ನ ಮಗಳೇನೋ ಸರಿ ಆದರೆ ಗುರು-ಹಿರಿಯರನ್ನು ದಿಕ್ಕರಿಸಿ ಮನೆ ಬಿಟ್ಟು ಹೋದ ಮೇಲೆ ಆಕೆಗೆ ಆಹ್ವಾನ ಕಲಿಸಲು ಮನಸ್ಸು ಒಪ್ಪಲಿಲ್ಲ. ಆದಕಾರಣ ಶಿವ ದಂಪತಿಗಳಿಗೆ ಇಲ್ಲಿ ಆಮಂತ್ರಣವಿಲ್ಲ ಎಂದನು. ನಾನು ಪರಿಪರಿಯಾಗಿಯೂ ಋಷ್ಯಾದಿಗಳೂ ಕೂಡ ಪರಿಪರಿಯಾಗಿ ಹೇಳಿದರೂ ಯಾರ ಮಾತು ಕೇಳಲಿಲ್ಲ ಇದನ್ನು ಕಂಡು ಬೇಸರಪಟ್ಟು ಯಾಗಶಾಲೆಯಿಂದ ನಿಮ್ಮಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿ ನಾರದರು ಹೊರಡುವುದರಲ್ಲಿ ಇದ್ದರು.

ಆದ ಶಿವನು ನಾರದ ನೀನು ಬಂದು ನಮ್ಮಿಬ್ಬರ ಕಲಹ ಉಂಟು ಮಾಡಿದೆ ನಮ್ಮ ಸಂಸಾರದಲ್ಲಿ ವಿಯೋಗ ಉಂಟಾಗುವಂತೆ ಮಾಡಿದೆ ಇನ್ನು ನಿನ್ನ ಕೆಲಸ ನಿನ್ನಿಷ್ಟದಂತೆಯೇ ಆಯಿತಲ್ಲವೇ ಎಂದು ಪರಶಿವನು ನುಡಿಯಲು ನಾರದರು ಶಿವನೇ ಸರ್ವಾಂತರ್ಯಾಮಿಯಾದ ನಿನಗೆ ತಿಳಿಯದೆ ನಾನು ಏನು ಮಾಡಿಲ್ಲ ನಮಸ್ಕಾರ ಎಂದು ಹೇಳಿ ಹೊರಟು ಹೋದನು. ಆಗ ದಾಕ್ಷಾಯಿಣಿಯು ಶಿವನನ್ನು ಕುರಿತು ತಮ್ಮ ತಂದೆ ಮಾಡುತ್ತಿರುವ ಯಾಗಕ್ಕೆ ಹೋಗಬೇಕೆಂದಿರುವೆ ನನ್ನನ್ನು ಕಳಿಸಿಕೊಡಿ ಎಂದು ಪರಿಪರಿಯಾಗಿ ಬೇಡಿದಳು.
ಶಿವನು ದಾಕ್ಷಾಯಿಣಿಯನ್ನು ಕುರಿತು ಕರೆಯದೆ ಇರುವ ಯಾಗಕೆ ಹೋಗಿ ಅವಮಾನ ಪಡಬೇಡ ಎಂದು ಒತ್ತಾಯಿಸಿದನೂ. ಕಾಲಚಕ್ರದ ವಿಧಿಯು ಯಾರನ್ನು ಬಿಡಲಾರದೆಂದು ಶಿವನು ಅರಿತನು ದಾಕ್ಷಾಯಿಣಿಯನ್ನು ಹೋಗೆಂದು ಹೇಳಿದನು. ಆಕೆಯ ಪತಿಯನ್ನು ಕುರಿತು ತನ್ನ ತಂದೆಗೆ ಬುದ್ಧಿ ಹೇಳುವೆನು.  ಆತನು ಕೇಳದೆ ಹೋದರೆ ಪುನಹ ನಾನು ಕೈಲಾಸ ಬರುವುದಿಲ್ಲ ಎಂದು ಹೇಳಿ ಅಲ್ಲಿಂದ ಹೊರಟಳು

ಇದನ್ನು ಕೇಳಿದ ಸ್ವಾಮಿಯು ಜೊತೆಯಲ್ಲಿ ನಂದಿ ಭೃಂಗೀಟಾದಿಗಳನ್ನು ಕಳುಹಿಸಿಕೊಟ್ಟನು. ಇತ್ತ ದಾಕ್ಷಾಯಿನಿಯು ಸಡಗರದಿಂದ ಯಾಗ ಶಾಲೆಗೆ ಬಂದಳು. ತಾಯಿಗೆ  ನಮಸ್ಕರಿಸಿದಳು ಅನಂತರ ತಂದೆಗೆ ನಮಸ್ಕರಿಸಲು ಬಂದಾಗ ದಕ್ಷನು ಮಗಳನ್ನು ಕುರಿತು ಕರೆಯದೇ ಬಂದವರು ಹೀನವಂತರು ಎಂದು ಮೂದಲಿಸಿ ಯಾಗ ಶಾಲೆ ಬಿಟ್ಟು ಹೊರಡು ಎಂದು ಆರ್ಭಟಿಸಿದನು. ಇದರಿಂದ ಮನನೊಂದು ದಾಕ್ಷಾಯಿಣಿಯು ತಂದೆಗೆ ಅನೇಕ ರೀತಿಯಲ್ಲಿ ಬುದ್ಧಿವಾದ ಹೇಳಿ ನೋಡಿದಳು. ಆತನ ಅವಿವೇಕಕ್ಕೆ ಕೋಪಗೊಂಡು ಶಿವನಿಗೆ ಹವಿಸ್ಸು ಇಲ್ಲದ ಯಜ್ಞವು ಲೋಕದಲ್ಲಿ ರಾಕ್ಷಸರ ಪಾಲಾಗಲಿ ಎಂದು ಶಪಿಸುತ್ತಾ ಅಲ್ಲಿಯೇ ಶಿವನನ್ನು ಕುರಿತು ಧ್ಯಾನಿಸಿ ತನ್ನ ಆತ್ಮ ಬಲದಿಂದಲೇ ಪ್ರಾಣವನ್ನು ಬಿಟ್ಟು ಶವವಾಗಿ ಬಿದ್ದಳು.

ಯಾಗ ಶಾಲೆಯಲ್ಲಿ ಶವ ಬಿದ್ದಿರುವುದರಿಂದ ಈ ಯಾಗದ ಫಲ ನಿನಗೆ ದಕ್ಕಲಾರದು ಹೇಳಿ ಮುನಿಗಳ ಎಲ್ಲರೂ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರೂ. ತಾಯಿಯು ಇಲ್ಲಿ ಬಿದ್ದಿರುವುದನ್ನು ನಂದಿ ನೋಡಿ ಅಲ್ಲಿಂದ ಕ್ಷಿಪ್ರ ಕಾಲದಲ್ಲಿ ಕೈಲಾಸಕ್ಕೆ ಬಂದು ಶಿವನಿಗೆ ವಿಷಯ ತಿಳಿಸಿದನು. ಕೋಪೋದ್ರಿಕ್ತನಾದ ಶಿವನ ತಾಂಡವ ನೃತ್ಯವನ್ನು ಮಾಡಿ ಆ ಕೋಪದಿಂದಲೇ ವೀರಭದ್ರಾದಿಗಣಗಳನ್ನು ತನ್ನ ಜಟೆಯಿಂದ ಸೃಷ್ಟಿಸಿ ದಕ್ಷ ಯಜ್ಞ ವನ್ನು ನಾಶ ಮಾಡಿರೆಂದು ಆಜ್ಞಾಪಿಸಿದನು. ವೀರಭದ್ರಾದಿಗಳು ಯಾಗ ನಾಶ ಮಾಡಿದ ಸಮಾಚಾರ ಶಿವನಿಗೆ ಹೇಳಿದರು. ಶಿವನು ಸತಿ ವಿರಹದ ದುಃಖವನ್ನು ತಾಳಲಾರದೆ ಶವವಿದ್ದ ಕಡೆಗೆ ಬಂದು ಅಳುತ್ತಾ ತನ್ನ ಹೆಗಲಮೇಲೇರಿಸಿಕೊಂಡು ಹುಚ್ಚನಂತೆ ಮೂರು ಲೋಕಗಳನ್ನು ಸುತ್ತುತ್ತಿದ್ದನು.

 ಇದನ್ನು ಅರಿತ ವಿಷ್ಣುವು ದಿಕ್ಕು ತೋಚದಂತಿದ್ದಾಗ ಶ್ರೀ ಚಕ್ರ ತಾಯಿಯನ್ನು ಆರಾಧಿಸಿದನು. ಆಗ ತಾಯಿಯು ಶಿವನಿಗೆ ಈ ವಿರಹ ದುಃಖ ಹೋಗಬೇಕಾದರೆ ಈ ಶವವನ್ನು ಸ್ವಲ್ಪ ಸ್ವಲ್ಪವಾಗಿ ಕತ್ತರಿಸಿ ಎಂದು ಹೇಳಿದನು. ವಿಷ್ಣುವು ಸುದರ್ಶನ  ಚಕ್ರದಿಂದಲೂ ಬ್ರಹ್ಮನು ತನ್ನ ಖಡ್ಗದಿಂದಲೂ ಆ ಶವವನ್ನು ಸ್ವಲ್ಪಸ್ವಲ್ಪವಾಗಿ ಕತ್ತರಿಸುತ್ತಿದ್ದರೆ . ಕಾಲಕ್ರಮೇಣ ಶರೀರವು ಪೂರ್ಣವಾಗಿ ಕತ್ತರಿಸಿ ಹೋಗಿತ್ತು. ಆಗ ಶಿವನು ತನ್ನ ದುಃಖ ಮರೆಯಲು ದಕ್ಷಿಣಾಭಿಮುಖವಾಗಿ ಕುಳಿತು ಶ್ರೀ ಚಕ್ರ ಮಂತ್ರವನ್ನು ಜಪಿಸುತ್ತಿದ್ದನು ಇತ್ತ ಸೃಷ್ಟಿಯು ಏರುಪೇರಾಗುವ ಸಮಯ ಬಂದಿತು ಆಗ ವಿಷ್ಣು ಆದಿ ಗಳು ಮತ್ತೆ ತ್ರಿಪುರ ಸುಂದರಿ ಯನ್ನು ಕುರಿತು ಪ್ರಾರ್ಥಿಸಿ ತಾಯಿಯೇ ಶಿವನಿಗೆ ಜ್ಞಾನೋದಯ ನೀಡು ಎಂದು ಪ್ರಾರ್ಥಿಸಿದರು.

ಆಗ ತಾಯಿಯು ನಿಮ್ಮೆಲ್ಲರ ಜ್ಞಾನವನ್ನು ಕೊಡಿರಿ ಆನಂತರ ನಾನು ಜ್ಞಾನ ಕೊಡುವೆ ಎಂದು ಹೇಳಿದಳು . ವಿಷ್ಣು ಬ್ರಹ್ಮ ಸರಸ್ವತಿ ಲಕ್ಷ್ಮಿ ಇಂದ್ರ ವರುಣ ಕುಬೇರ ನಾಗರು ಸಿದ್ದರು ವಶಿನ್ಯಾ ದಿ ದೇವತೆಗಳು ಸಂಕ್ಷೋಬಿಣ್ಯಾದಿ ಶಕ್ತಿಗಳು ಎಲ್ಲರೂ ಜ್ಞಾನವನ್ನು ಅವರ ಯೋಗ್ಯತೆಗೆ ತಕ್ಕಂತೆ ಶಿವನಲ್ಲಿ ಆಯ್ಕೆ ಮಾಡಿದರು. ಆದರೆ ಯಾರ ಜ್ಞಾನದಿಂದಲೂ ಶಿವನ ಬೆಳಕನ್ನು ಕಾಣಲಿಲ್ಲ. ಆಗ ತಾಯಿಯು ಶಿವನಿಗೆ ಕಾಳಿ ರೂಪದಲ್ಲಿ ಜ್ಞಾನವನ್ನು ಕೊಟ್ಟಳು. ಅಜ್ಞಾನದಿಂದ ಶಿವನು ಜ್ಞಾನ ಋಷಿಯಾಗಿ ಶ್ರೀ ಚಕ್ರ ದೇವತೆಯನ್ನು ಪರಿಪರಿಯಾಗಿ ಪ್ರಾರ್ಥಿಸಿದನು. ತಾಯಿಯು ತೃಪ್ತಳಾಗಿ ಶಿವನನ್ನೇ ತನ್ನ ಚಕ್ರ ಪೂಜೆಗೆ ಗುರುವನ್ನಾಗಿ ಮಾಡಿಕೊಂಡು ಮಹಾ ಜ್ಞಾನದ ಕಾಳಿ ಜ್ಞಾನವನ್ನು ಅವನಲ್ಲಿ ಸ್ಥಿರವಾಗಿ ಉಳಿಸಿದಳು ಆದಕಾರಣ ಕಾಳಿಯು ಶಿವ ಜ್ಞಾನ ಸ್ವರೂಪಿ ಎಂದು ಕರೆದರು. ಶಿವನು ಕೂಡ ಕಾಳಿಯನ್ನು ಆರಾಧಿಸಿ ಲೋಕಕ್ಕೆ ಪ್ರಥಮ ಗುರು ಆದ ನೆಂದು ಹೇಳಿದ ದೇವಿ ಭಾಗವತ
ಕಾಳಿಯನ್ನು ಪೂಜಿಸಿದರೆ ಶತ್ರು ಸಂಹಾರ ವಾಗುವುದಲ್ಲದೆ ನಮಗೆ ಅಪಾರ ಜ್ಞಾನ ಲಭಿಸುವುದು ಆದ್ದರಿಂದ ಶ್ರೀಚಕ್ರದಲ್ಲಿ ಕಾಳಿ ಪೂಜೆಯು ಜ್ಞಾನವೃದ್ಧಿ ಎಂದು ಹೆಸರಾಯಿತು.

ನನ್ನ ಆರಾಧ್ಯ ಅನುಷ್ಠಾನ ದೇವತೆ ದಶಮಹಾವಿದ್ಯಾ ಶ್ರೀ ಚಕ್ರ ರೂಪಿಣಿ ದಕ್ಷಿಣ ಕಾಳಿ ಎಲ್ಲರಿಗೂ ಶುಭವನ್ನು ನೀಡಲಿ
ಲೋಕ ಸಮಸ್ತ ಸುಖಿನೋ ಭವಂತು

ಕಿರಣ್ ಜಯರಾಮ್ ಆಚಾರ್ಯ
ಚಾರ್ಟೆಡ್ ಅಕೌಂಟೆಂಟ್

Comments

Popular posts from this blog

ಶ್ರೀ ಚಕ್ರ ಮತ್ತು ಅದರ ಮಹಿಮೆ

ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ, ಶ್ರೀಚಕ್ರದ ಮೇಲೆ ಇಟ್ಟ ದೃಷ್ಟಿ ನರಮಂಡಲದಲ್ಲಿ ಉಂಟಾಗುವ ಕಂಪನ ಇಇಜಿಯಲ್ಲಿ (ಎಲೆಕ್ಟ್ರೋ ಎನ್ ಕೆಫಲೋಗ್ರಾಫ್) ಆಲ್ಫಾ ಅಲೆ ಹೊರಡಿಸುತ್ತದೆ. ಧ್ಯಾನ ಸ್ಥಿತಿಯಲ್ಲೂ ಈ ಅಲೆ ನಿಧಾನಗತಿಯಲ್ಲಿ ಹೊರಹೊಮ್ಮುತ್ತದೆ, ಯಾವುದೇ ಇತರ ಚಕ್ರ ವೀಕ್ಷಿಸಿದಾಗ ಇಇಜಿ ಅಲೆಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ, ಶಕ್ತಿಯುತ ಅಣು ಕ್ಷಣಗಳಿಂದಾದ ಅಲೆ ವಿದ್ಯುತ್ ಅಯಸ್ಕಾಂತ ಬಲಕಾರಕ ಶಕ್ತಿ ಸಮಾಗಮಕ್ಕೆ ನಾಂದಿ, ಶ್ರೀಚಕ್ರದ ಮೂಲಕ ದಿವ್ಯ ಮಂತ್ರೋಚ್ಚಾರಗಳಿಂದಾದ ಶಬ್ಧ ಬ್ರಹ್ಮ ಶಕ್ತಿ ಇದನ್ನು ಸಾಧಿಸುತ್ತದೆಂದು ಭಾವಿಸಬಹುದು, ಒಂದು ದೃಷ್ಟಿಯಲ್ಲಿ ಆದಿ ಶಂಕರಾಚಾರ್ಯರನ್ನು ಕಣ ಭೌತ ಶಾಸ್ತ್ರದ ಪಿತಾಮಹ ಎನ್ನಬಹುದು. ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನೇ ನಿಗ್ರಹಿಸಿದರು, ಶ್ರೀ ಸೌಂದ...

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ ಅಂದರೆ .. ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು. ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು . ೧. ಉಚ್ಚಿಷ್ಟಮ್ - ಎಂದರೆ ಎಂಜಲು . ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ . ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ , ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು. ೨. ಶಿವನಿರ್ಮಾಲ್ಯಮ್ - ಎಂದರೆ ಶಿವನ ಜಟೆಯಿಂದ ಹೊರಗೆ ಬಂದ ಗಂಗೆ . ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು . ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ.  ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ.  ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು.  ಆದರೂ ಈ ಗಂಗೆಯು ಪವಿತ್ರ. ೩. ವಮನಮ್ - ಎಂದರೆ ವಾಂತಿ . ಜೇನುತುಪ್ಪ . ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು,  ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ.  ಅದೇ ಜೇನು ತುಪ್ಪ.  ಇದು ಜೇನುಹುಳುಗಳ ವಮನ. ಆದರೆ ಜೇನು...

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು? ಏಕೆ?

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು?  ಏಕೆ? ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು. ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ| ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:|| ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ. ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು  ?  ಏಕೆ? ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇ...