Skip to main content

ಶ್ರೀ ತಾರಾ ಮಹಾತ್ಮೆ

ಶ್ರೀ ತಾರಾ ಮಹಾತ್ಮೆ( ದಶಮಹಾವಿದ್ಯೆಯ ಎರಡನೆಯ ಸಾಧನೆ)



ಹಿಂದೆ ಪ್ರಹಲ್ಲಾದ  ವಂಶದವರಾದ ರಾಕ್ಷಸ  ಸುರರಲ್ಲಿ ತುಮುಲಾ ಸುರ ಒಬ್ಬನು. ಈತನು ದೈವ ಭಕ್ತನಾಗಿದ್ದನು ಆಗ ನಾರದರು ಬಂದು ರಾಕ್ಷಸನನ್ನು ಕುರಿತು ನೀನು ಅಪರಮಿತ ಮೇಧಾವಿ ಆಗಿರುವೆ ಆದರೆ ನಿನಗೆ ವಾಕ್ ಸಿದ್ದಿಯಿಲ್ಲ . ಆದ್ದರಿಂದ ನೀನು ನಿಮ್ಮ ಗುರುಗಳಾದ ಶುಕ್ರಾಚಾರ್ಯರಲ್ಲಿ ಹೋಗಿ ಸರಸ್ವತಿ ಅನುಗ್ರಹ ಬರುವಂತೆ ಆಶೀರ್ವದಿಸಿ ಮಂತ್ರೋಪದೇಶ ಮಾಡೆಂದು ಹೇಳಿ ಅವರಿಂದ ಪಡೆದರೆ ನಿನಗೆ ಒಳ್ಳೆಯ ಭವಿಷ್ಯ ಇದೆ ಎಂದು ಹೇಳಿ ಹೊರಟು ಹೋದರು. ರಾಜನ ಅನೇಕ ದಿನಗಳ ಕಾಲ ಯೋಚಿಸಿ ಕಡೆಗೆ ಒಂದು ದಿನ ಗುರುಗಳಲ್ಲಿ ಬಂದು ದೀನನಾಗಿ ನಮಸ್ಕರಿಸಿದನು. ಗುರುಗಳು ಅನುಗ್ರಹಿಸಿ ರಾಜನನ್ನು ಕುರಿತು ನಿನ್ನ  ಮನೊಸಿದ್ದಿ ಏನಿದೆ  ಎಂದರು.

ಆಗ ರಾಜನು ತಾನು ಮಾತಿನಲ್ಲಿ ಎಲ್ಲರನ್ನೂ ಗೆಲ್ಲಬೇಕು ಅದಕ್ಕೆ ಸರಸ್ವತಿ ಮಂತ್ರೋಪದೇಶ ಮಾಡಿರಿ ಎಂದು ಪ್ರಾರ್ಥಿಸಿದನು ಗುರುಗಳು ಇವನ  ಮನೊ ಇಚ್ಛೆಯನ್ನು ನಾರದರೆ  ಹೇಳಿರಬೇಕೆಂದು ದಿವ್ಯದೃಷ್ಟಿಯಿಂದ ತಿಳಿದುಕೊಂಡು ರಾಜನೆ ಆ ಮಂತ್ರೋಪದೇಶ ದಿಂದ ನಿನಗೆ ನೀನೇ ಮೃತ್ಯುವಾಗುವೆ ಆದುದರಿಂದ ಅದು ಬೇಡ ಎಂದು ಪದೇ ಪದೇ ಹೇಳಿದರು. ರಾಜನು ಯಾವುದಕ್ಕೂ ಒಪ್ಪದೇ ಹೋಗಿ ಗುರುಗಳನ್ನು ಬಹಳವಾಗಿ ಪೀಡಿಸಿದನು. ಅವನ ಕರ್ಮಕ್ಕೆ ಬೇರೆ ದಾರಿ ಕಾಣದ ಗುರುಗಳು ಸುಮುಹೂರ್ತದಲ್ಲಿ ಆತನಿಗೆ ಉಪದೇಶ ಮಾಡಿದರು. ರಾಜನೇ ತಾಯಿಯು ಪ್ರತ್ಯಕ್ಷವಾದಾಗ ನನಗೆ ನಾಲಿಗೆಯಲ್ಲಿ ನುಡಿದ ಮಾತು ಸತ್ಯ ವಾಗುವಂತೆ ಅನುಗ್ರಹಿಸು ಎಂದು ಹೇಳು ನನಗೆ ನನ್ನ ಮಾತಿನ ವಿನಹ ಅನ್ಯರಿಂದ ಮರಣ ಬಾರದಂತೆ ವರ ಕೇಳಿಕೋ. ಆಕೆಯ ವರ ಪಡೆದು ಬಂದರೆ ಮುಂದೆ ನಿನಗೆ ನಾನು ಸಂಜೀವಿನಿ ವಿದ್ಯೆ ಹೇಳಿಕೊಡುವೆ. ಇಂದಿನವರೆಗೆ ನಿಮ್ಮ ವಂಶದಲ್ಲಿ ಯಾರೂ ಪಡೆಯಲಿಲ್ಲ ಇದರಿಂದ ಕೀರ್ತಿ ಗೌರವ ಪಡೆದು ದೇವತೆಗಳನ್ನು ಹಿಮ್ಮೆಟ್ಟಿಸಿ ಇಂದ್ರ ಪದವಿ ಪಡೆಯುವವನಾಗು ಎಂದು ಹರಸಿದನು.

ರಾಜನು ಭಕ್ತಿಯಿಂದ ಸ್ವೀಕರಿಸಿ ಅನೇಕ ವರ್ಷಗಳ ಕಾಲ ತಪಸ್ಸು ಮಾಡಿ ಕಡೆಗೆ ಸಾಕ್ಷಾತ್ ಸರಸ್ವತಿಯೇ ಪ್ರತ್ಯಕ್ಷಳಾಗಿ ಬಂದು ರಾಜನಿಗೆ ವರ ನೀಡಿದಳು. ಇದರಿಂದ ತುಮುಲಾಸುರನು ಅತ್ಯಂತ ಪ್ರಭಾವಿ ರಾಜನಾಗಿ ಬಲಿಷ್ಠನಾಗಿ ಊರಿಗೆ ಬರಬೇಕೆಂದು ನಿಶ್ಚಯಿಸಿಕೊಂಡನು. ಅಷ್ಟರಲ್ಲಿ ತುಮುಲಾನು ಸರಸ್ವತಿಯನ್ನು ಕುರಿತು ಅಮ್ಮ ನೀನು ಕೊಟ್ಟ ವರ ದೇವತಾ ವರವಾಯಿತು. ಆದ ಕಾರಣ ನನಗೆ ನಿನ್ನಿಂದಲೇ ಮರಣ ವಾಗುವಂತೆ ಅನ್ಯರಿಂದ ಆಗದಂತೆ ವರ ಕೊಡು ಎಂದನು. ತಾಯಿಯ ರಾಜನನ್ನು ಹರಸಿ ವರ ನೀಡಿದಳು. ಆಗ ರಾಜನು ತಾಯಿಯೊಡನೆ ಸರಸ ಸಂಭಾಷಣೆ ಮಾಡುತ್ತಾ ಕಡೆ ಕಡೆಯಲ್ಲಿ ಕ್ರೋಧದಿಂದ ವರ್ತಿಸಿ ಮಾತನಾಡಿದನು. ತಾಯಿಯು ಅವನ ಆಕ್ರೋಶದ ಮಾತಿನ ಎದುರು ನಿಲ್ಲಲಾರದೆ ಪರಾಜಯ ಹೊಂದಿದ್ದಳು ಇದರಿಂದ ತಾಯಿಯು ಮನನೊಂದು ಶ್ರೀ ಚಕ್ರ ದೇವತೆಯನ್ನು ನೆನೆದು ರಾಜನೆ ಎನ್ನ ಮಾತು ನಿನಗೆ ಮೃತ್ಯು ಆಗಲಿ ಎಂದು ಶಪಿಸಿ ಹೊರಟು ಹೋದಳು.

ಇತ್ತ ರಾಜನು ವಿಜಯೋತ್ಸವದಿಂದ ಊರಿಗೆ ಬಂದು ಗುರುಗಳಿಗೆ ನಮಸ್ಕರಿಸಿದನು. ಗುರುಗಳು ಆಶೀರ್ವದಿಸಿದರು ಆನಂತರ ಅಲ್ಲೇ ನಡೆದ ವಿದ್ಯಮಾನವನ್ನು ನಿಧಾನವಾಗಿ ಕೇಳಿ ತಿಳಿದುಕೊಂಡು ಸಮಾಧಾನ ಹೇಳಿ ಸುಮ್ಮನಾದನು. ರಾಜನು ತನ್ನ ವಾಕ್ ಸಿದ್ಧಿ ಪ್ರಭಾವದಿಂದ ಶತ್ರುಗಳನ್ನು ಮಾತಿನಲ್ಲಿ ಜಗಳವಾಡಿ ಅದರಲ್ಲಿ ಸೋಲಿಸಿ ಶಪಿಸಿ ಘೋರವಾದ ಯುದ್ಧದಿಂದ ಅವರನ್ನು ಸಂಹರಿಸುತ್ತಿದ್ದನು. ಹೀಗೆ ಎಲ್ಲರನ್ನೂ ಕೊಂದು ದೇವತೆಗಳ ಮೇಲೆ ದಂಡೆತ್ತಿ ಹೋಗಿ ಮಾತಿನಲ್ಲಿ ನಿರ್ವೀರ್ಯ ವಾಗಿ ಕಠೋರವಾಗಿ ಅವರನ್ನು ಸಂಹರಿಸುತ್ತಿದ್ದನು. ಇದರಿಂದ ಬಹಳ ದುಃಖಪಟ್ಟು ಇಂದ್ರನು ವಿಷ್ಣುವನ್ನು ಪ್ರಾರ್ಥಿಸಿದನು. ಆಗ ಸ್ವಾಮಿಯು ತನ್ನ ಬಳಗದವರನ್ನೆಲ್ಲಾ ಕರೆದುಕೊಂಡು ಶ್ರೀಚಕ್ರವನ್ನು ಆರಾಧಿಸಿದರು. ಆಗ ತಾಯಿಯು ಪ್ರತ್ಯಕ್ಷವಾಗಿ ಬೇಡಿಕೆಗಳನ್ನು ಕೇಳಿ ತಾನೇ ಅವತಾರ ಹೊಂದಿ ರಾಜನನ್ನು ಸಂಹರಿಸುವೆ ಎಂದು ಅಭಯ ನೀಡಿದಳು.

ಇತ್ತ ವಿಷ್ಣುವು ಬ್ರಹ್ಮ ಸತ್ರಯಾಗವನ್ನು ಮಾಡಿದಾಗ ಶ್ರೀ ಚಕ್ರದಿಂದ ಒಂದು ಶಕ್ತಿ ಉದಯಿಸಿ ಬಂದು ಅಗಾಧವಾದ ರೂಪ ತಾಳಿ ಮುಂದೆ ನಿಂತಿತು. ಆಗ ಅವರೆಲ್ಲರೂ ಹೊಗಳಿದರು ಎಲ್ಲರೂ ತಮ್ಮ ತಮ್ಮ ವಾಕ್ ಶಕ್ತಿಯನ್ನು ಕೊಟ್ಟರು ಸರಸ್ವತಿಯು ತಾನು ಮಾಡಿದ ತಪ್ಪನ್ನು ಸ್ಮರಿಸಿ ತಾಯಿಗೆ ವಾಕ್ ಶಕ್ತಿ ಕೊಟ್ಟಳು. ಹೀಗೆ ಶಕ್ತಿಗಳ ಶೇಖರಣೆ ಹೊಂದಿದ ದೇವಿಯು ಅಷ್ಟಭುಜಾದಿಗಳಿಂದ ಕುಡಿದ ಭಯಂಕರವಾಗಿ ಕಾಣಿಸಿಕೊಂಡು ರಾಜನ ಮೇಲೆ ಯುದ್ಧಕ್ಕೆ ಹೋಯಿತು. ಇತ್ತ ರಾಜನು ಸ್ತ್ರೀಶಕ್ತಿಯೊಂದು ಬರುತ್ತಿರುವುದನ್ನು ತಿಳಿದು ಅದರ ಎದುರು ನಿಂತು ವಾಗ್ವಾದಕ್ಕೆ ನಿಂತನು. ಅನೇಕ ವರ್ಷಗಳೆ ಉರುಳಿದವು ರಾಜನ ವಾಕ್ ಶಕ್ತಿಯು ದಿನೇ ದಿನೇ ಉದುಗಿ ಹೋಯಿತು. ಆದ್ದರಿಂದ ಕುಪಿತನಾದ ರಾಕ್ಷಸನು ಘೋರವಾದ ಯುದ್ಧವನ್ನು ಚಿತ್ರವಿಚಿತ್ರವಾಗಿ ಮಾಡುತ್ತಿದ್ದನು. ತಾಯಿಯು ಅವನ ಆಟವನ್ನು ಅಲ್ಲಲ್ಲಿಯೇ ತಡೆದು ಚಿವುಟಿ ಹಾಕುತ್ತಿದ್ದಳು. ಇತ್ತ ರಾಜನು ಮಾತಿನಲ್ಲಿ  ನಿರ್ವೀರ್ಯನಾದಗ ಮಂತ್ರಶಕ್ತಿಯ ಪ್ರಭಾವ ತಾನಾಗಿಯೇ ಉದುಗಿ ಹೋಯಿತು. ಯುದ್ಧವು ಘೋರವಾಗಿ ನಡೆಯಿತು‌. ಇತ್ತ ರಾಕ್ಷಸರ ನಾಶವು ವಿಪರೀತವಾದಾಗ ಶುಕ್ರಾಚಾರ್ಯರು ಸಂಜೀವಿನಿ ವಿದ್ಯೆಯಿಂದ ಬದುಕಿಸಲು ಮುಂದಾದರು. ಆಗ ತಾಯಿಯು ಪ್ರತ್ಯಕ್ಷವಾಗಿ ನೀವು ಮಂತ್ರ ಶಕ್ತಿಯನ್ನು ರಾಕ್ಷಸರಿಗೆ ಹೇಳಿ ಬದುಕಿಸಿದರೆ ಮುಂದೆ ಆ ಮಂತ್ರವೇ ನಿಮ್ಮನ್ನು ನಾಶ ಮಾಡುತ್ತದೆ ಎಂದು ಶಕ್ತಿಯು ಎಚ್ಚರಿಸಿತು. ಮುಂದಿನ ದಾರಿ ಕಾಣದೆ ಆಚಾರ್ಯರು ರಾಕ್ಷಸರನ್ನು ಬದುಕಿಸುವ ಕೆಲಸಕ್ಕೆ ಹೋಗದೆ ರಾಜನೇ ನಿನ್ನ ಅವಸಾನವು ಶ್ರೀ ಚಕ್ರ ದೇವತೆಯಿಂದ ಸಾಧ್ಯವಾಗುವುದು ಎಂದು ಶಪಿಸಿದರು. ಆನಂತರ ಘೋರ ಯುದ್ದದಿಂದ ತತ್ತರಿಸಿದ ರಾಜನನ್ನು ಕಂಡು ದೇವಿಯು ರಾಜನ ಹೃದಯವನ್ನು ಪ್ರವೇಶಿಸಿ  ಮೃತ್ಯುಂದಧಾಮಿ ಎಂದು ಹೇಳಿದಳು. ಶಕ್ತಿಯು ತನ್ನ ಬಲವಾದ ಆಯುಧದಿಂದ ರಾಜನ ತಲೆಯನ್ನು ಕಡಿದಳು. ಆ ತಲೆಯು ನೆಲಕ್ಕೆ ಬೀಳದಂತೆ ಅದನ್ನು ತನ್ನ ಮಾಯಾ ಶಕ್ತಿ ಯಿಂದ ಹೊತ್ತು ತಿಲ ದಲ್ಲಿ ಸೇರಿಸಿ ಅದನ್ನು ಪುಡಿ ಮಾಡಿ ಅದರ ತೈಲವನ್ನು ತನ್ನ ಮೈಗೆ ಹಚ್ಚಿಕೊಂಡಳು. ಆದ ರಾಕ್ಷಸನನ್ನು ಪುನರ್ಜನ್ಮವಿಲ್ಲ ದಂತೆ ಮಾಡಿ ದೇವತೆಗಳನ್ನು ರಕ್ಷಿಸಿದಳು.

ದೇವಾಧಿದೇವತೆಗಳು ಹರ್ಷದಿಂದ ತಾಯಿಯನ್ನು ಕೊಂಡಾಡಿದರು ಅನಂತರ ವಿಷ್ಣು ತಾಯಿಯನ್ನು ಕುರಿತು ತಾಯಿಯೇ ರಾಕ್ಷಸನನ್ನು ಸಂಹರಿಸಿ ಆತನನ್ನು ತಿಲದಲ್ಲಿ ಸಂಯೋಜಿಸಿ ಅದರಿಂದಲೇ ಎಣ್ಣೆ ತೆಗೆದು ಮೈಗೆ ಹಚ್ಚಿಕೊಂಡಿರಲಿಲ್ಲ ಇದರ ಮೂಲ ತತ್ವವೇನು ಎಂದು ಪ್ರಾರ್ಥಿಸಿದನು. ಆಗ ಶ್ರೀಚಕ್ರ ದೇವತೆಯು ತುಮುಲನು ಮೃತ್ಯುಂದಧಾಮಿ ಎಂದು ಮೂರು ಸಲ ಹೇಳಿದನು. ಆತನಿಗೆ ವಾಕ್ ಸಿದ್ಧಿ ಇದೆ. ಆತನ ತಲೆಯನ್ನು ಆಗಲಿ ಶರೀರವನ್ನು ಆಗಲಿ ಯಾರು ಸ್ಪರ್ಶಿಸಿದರು ಅವರೆಲ್ಲರೂ ಸಾಯುವುದು ಖಂಡಿತ ಆದ ಕಾರಣ ಆತನ ಶರೀರ ಮತ್ತು ಶಿರಸ್ಸನ್ನು ತಿಲ ದಲ್ಲಿ ಐಕ್ಯಮಾಡಿ ಅದರಿಂದ ತೈಲ ತೆಗೆದು ನಾನೇ ಬಳಿದುಕೊಂಡಿದ್ದೇನೆ. ಇದರಿಂದ ಆತನು ನನ್ನಲ್ಲಿ ಸೇರಿ ಹೋದನು ಆತನು ವಿಷ್ಣು ಭಕ್ತರಿಂದ ವಿಷ್ಣು ದೇಹದಿಂದ ಬಂದಿರುವ ತಿಲ ಎಂದೆನಿಸಿತು ಆತನು ತಿಲಾರೂಪಿಯಾಗಿ ದ್ದರಿಂದ ಮೃತ್ಯುವಾದವರಿಗೆ ಪ್ರೀತಿಯಾಯಿತು. ಇದರ ಕಾರಣದಿಂದಲೇ ಶ್ರೀ ಚಕ್ರ ದೇವತೆಯಾಗಿ ನಾನು #ತಾರಾ ರೂಪದಲ್ಲಿ ಅವತರಿಸಿ ಕೋರಿದವರಿಗೆ ವಾಕ್ ಸಿದ್ಧಿ ಕೊಡುವ ದೇವತೆ ಆಗಿರುವೆ ಎಂದು ಹೇಳಿ ಅಂತರ್ಧಾನವಾದಳು ಆದ್ದರಿಂದ ಶ್ರೀಚಕ್ರ ಪೂಜಿಸಿದವರಿಗೆ ವಾಕ್ ಸಿದ್ಧಿ ಚೆನ್ನಾಗಿರುತ್ತದೆ.

ಎಲ್ಲರಿಗೂ ನವರಾತ್ರಿಯ ಶುಭಾಶಯಗಳು ವಾಕ್ ಸಿದ್ಧಿಯನ್ನು ತಾರಾದೇವಿ ಅನುಗ್ರಹಿಸಲಿ
ಸರ್ವೇ ಜನಾ: ಸುಖಿನೋ ಭವಂತು

ಕಿರಣ್ ಜಯರಾಮ ಆಚಾರ್ಯ
ಚಾರ್ಟರ್ಡ್ ಅಕೌಂಟೆಂಟ್

Comments

Popular posts from this blog

ಶ್ರೀ ಚಕ್ರ ಮತ್ತು ಅದರ ಮಹಿಮೆ

ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ, ಶ್ರೀಚಕ್ರದ ಮೇಲೆ ಇಟ್ಟ ದೃಷ್ಟಿ ನರಮಂಡಲದಲ್ಲಿ ಉಂಟಾಗುವ ಕಂಪನ ಇಇಜಿಯಲ್ಲಿ (ಎಲೆಕ್ಟ್ರೋ ಎನ್ ಕೆಫಲೋಗ್ರಾಫ್) ಆಲ್ಫಾ ಅಲೆ ಹೊರಡಿಸುತ್ತದೆ. ಧ್ಯಾನ ಸ್ಥಿತಿಯಲ್ಲೂ ಈ ಅಲೆ ನಿಧಾನಗತಿಯಲ್ಲಿ ಹೊರಹೊಮ್ಮುತ್ತದೆ, ಯಾವುದೇ ಇತರ ಚಕ್ರ ವೀಕ್ಷಿಸಿದಾಗ ಇಇಜಿ ಅಲೆಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ, ಶಕ್ತಿಯುತ ಅಣು ಕ್ಷಣಗಳಿಂದಾದ ಅಲೆ ವಿದ್ಯುತ್ ಅಯಸ್ಕಾಂತ ಬಲಕಾರಕ ಶಕ್ತಿ ಸಮಾಗಮಕ್ಕೆ ನಾಂದಿ, ಶ್ರೀಚಕ್ರದ ಮೂಲಕ ದಿವ್ಯ ಮಂತ್ರೋಚ್ಚಾರಗಳಿಂದಾದ ಶಬ್ಧ ಬ್ರಹ್ಮ ಶಕ್ತಿ ಇದನ್ನು ಸಾಧಿಸುತ್ತದೆಂದು ಭಾವಿಸಬಹುದು, ಒಂದು ದೃಷ್ಟಿಯಲ್ಲಿ ಆದಿ ಶಂಕರಾಚಾರ್ಯರನ್ನು ಕಣ ಭೌತ ಶಾಸ್ತ್ರದ ಪಿತಾಮಹ ಎನ್ನಬಹುದು. ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನೇ ನಿಗ್ರಹಿಸಿದರು, ಶ್ರೀ ಸೌಂದ...

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ ಅಂದರೆ .. ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು. ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು . ೧. ಉಚ್ಚಿಷ್ಟಮ್ - ಎಂದರೆ ಎಂಜಲು . ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ . ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ , ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು. ೨. ಶಿವನಿರ್ಮಾಲ್ಯಮ್ - ಎಂದರೆ ಶಿವನ ಜಟೆಯಿಂದ ಹೊರಗೆ ಬಂದ ಗಂಗೆ . ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು . ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ.  ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ.  ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು.  ಆದರೂ ಈ ಗಂಗೆಯು ಪವಿತ್ರ. ೩. ವಮನಮ್ - ಎಂದರೆ ವಾಂತಿ . ಜೇನುತುಪ್ಪ . ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು,  ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ.  ಅದೇ ಜೇನು ತುಪ್ಪ.  ಇದು ಜೇನುಹುಳುಗಳ ವಮನ. ಆದರೆ ಜೇನು...

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು? ಏಕೆ?

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು?  ಏಕೆ? ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು. ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ| ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:|| ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ. ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು  ?  ಏಕೆ? ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇ...