Skip to main content

ಧ್ಯಾನಿಸುವ ಬಗ್ಗೆ ಒಂದು ಚಿಂತನೆ



ಸಮತೋಲನದಲ್ಲಿರುವುದು ಮನಸ್ಸಿಗೆ ಅಸಾಧ್ಯ ಅದು ಅತ್ಯಂತ ಕಷ್ಟವೆಂದೇ ತೋರುತ್ತದೆ. ಸಮತೋಲನದಲ್ಲಿರುವುದು ಎಂದರೆ ಶೂನ್ಯದಲ್ಲಿರುವುದು. ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ಸಾಗುವುದು ಅತ್ಯಂತ ಸುಲಭ. ಒಂದು ಧ್ರುವದಿಂದ ಇನ್ನೊಂದಕ್ಕೆ ಸಾಗುವುದು ಮನಸ್ಸಿನ ಲಕ್ಷಣ. ನೀವು ಸಮತೋಲನದಿಂದಿದ್ದರೆ, ಮನಸ್ಸು ಕಣ್ಮರೆಯಾಗುತ್ತದೆ. ನೀವು ಅಸಮತೋಲನಗೊಂಡಾಗ ಅದು ಅಲ್ಲಿರುತ್ತದೆ, ನೀವು ಸಮತೋಲನಗೊಂಡಾಗ ಅದು ಮರೆಯಾಗುತ್ತದೆ. ಆದ್ದರಿಂದಲೇ ಅತಿಯಾಗಿ ತಿನ್ನುವವರಿಗೆ ಉಪವಾಸ ಮಾಡುವುದು ಸುಲಭ.

ಈ ಮಾತು ಅತಾರ್ಕಿಕವೆಂದು ತೋರಬಹುದು. ಆಹಾರದ ಬಗ್ಗೆ ಕಡು ವ್ಯಾಮೋಹಿಯಾಗಿರುವವರು ಉಪವಾಸ ಮಾಡಲಾರರು ಎಂದುಕೊಳ್ಳುವಿರಿ. ಆದರೆ ತಪ್ಪು. ಆಹಾರದ ಬಗ್ಗೆ ಕಡು ವ್ಯಾಮೋಹಿಯಾದ ವ್ಯಕ್ತಿಯೇ ಉಪವಾಸ ಮಾಡಬಲ್ಲ. ಏಕೆಂದರೆ ಉಪವಾಸ ಎಂದರೆ ಅದೇ ಕಡು ವ್ಯಾಮೋಹ, ಆದರೆ ವಿರುದ್ಧ ದಿಕ್ಕಿನಲ್ಲಿ ಅಷ್ಟೆ. ನೀವು ನಿಮ್ಮನ್ನು ಬದಲಿಸಿಕೊಳ್ಳುತ್ತಿಲ್ಲ. ನೀವಿನ್ನೂ ಆಹಾರದ ಬಗ್ಗೆ ಕಡು ವ್ಯಾಮೋಹಿಯಾಗಿಯಿದ್ದೀರಿ. ಮೊದಲು ನೀವು ಅತಿಯಾಗಿ ತಿನ್ನುತ್ತಿದ್ದಿರಿ, ಈಗ ಹಸಿವೆಯಿಂದ ಇದ್ದೀರಿ. ಆದರೆ ಮನಸ್ಸು ಇನ್ನೂ ಆಹಾರದ ಕುರಿತೇ, ಆದರೆ ವಿರುದ್ಧ ದಿಕ್ಕಿನಲ್ಲಿ ಗಮನ ಕೇಂದ್ರೀಕರಿಸಿದೆ.

ದ್ವೇಷವೂ ಹಾಗೆಯೇ. ಒಂದು ವಿಷಯದ ಕುರಿತು ನಿಮಗೆ ಪ್ರೀತಿ ಇರದಿದ್ದರೆ, ಕಾಳಜಿ ಇರದಿದ್ದರೆ ಹೇಗೆ ತಾನೇ ದ್ವೇಷಿಸಬಲ್ಲಿರಿ? ಪ್ರೀತಿ ಎನ್ನುವುದು ಆತ್ಯಂತಿಕ ದ್ವೇಷದ ಸಂಬಂಧವೆಂದು ಆಧುನಿಕ ಸಂಶೋಧನೆ ಹೇಳುತ್ತದೆ. ನಮಗೆ ಇಷ್ಟು ಆಪ್ತರಾಗಿದ್ದವರು ಹೇಗೆ ಶತ್ರುಗಳಾಗಬಲ್ಲರು ಎಂದು ನಮಗೆ ಅಚ್ಚರಿಯಾಗುತ್ತದೆ; ಮೊದಲು ಗೆಳೆಯನಾಗಿದ್ದವರು ಈಗ ಹೇಗೆ ಶತ್ರುವಾಗಬಲ್ಲರು?

ತರ್ಕ ಮೇಲ್ಮಟ್ಟದಲ್ಲಿ ನಿಲ್ಲುತ್ತದೆ, ಆದರೆ ಬದುಕು ಆಳಕ್ಕೆ ಸಾಗುತ್ತದೆ. ಬದುಕಿನಲ್ಲಿ ಎಲ್ಲ ವೈರುಧ್ಯಗಳನ್ನೂ ಒಟ್ಟಾಗಿ ಹೆಣೆಯಲಾಗಿದೆ. ಅವು ಒಟ್ಟಾಗಿ ಅಸ್ತಿತ್ವದಲ್ಲಿರುತ್ತವೆ. ಇದನ್ನು ನೆನಪಿಡಿ; ಸಮತೋಲನ ಸಾಧ್ಯವಾಗುತ್ತದೆ, ಆಗ ಧ್ಯಾನ ಸಂಭವಿಸುತ್ತದೆ.

ಬದುಕಿನ ಸೌಂದರ್ಯವಿರುವುದೇ ಇಲ್ಲಿ. ಹೀಗೆ ಶೂನ್ಯದಲ್ಲಿ ಇರುವುದರಲ್ಲಿ…..

Comments

Popular posts from this blog

ಶ್ರೀ ಚಕ್ರ ಮತ್ತು ಅದರ ಮಹಿಮೆ

ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ, ಶ್ರೀಚಕ್ರದ ಮೇಲೆ ಇಟ್ಟ ದೃಷ್ಟಿ ನರಮಂಡಲದಲ್ಲಿ ಉಂಟಾಗುವ ಕಂಪನ ಇಇಜಿಯಲ್ಲಿ (ಎಲೆಕ್ಟ್ರೋ ಎನ್ ಕೆಫಲೋಗ್ರಾಫ್) ಆಲ್ಫಾ ಅಲೆ ಹೊರಡಿಸುತ್ತದೆ. ಧ್ಯಾನ ಸ್ಥಿತಿಯಲ್ಲೂ ಈ ಅಲೆ ನಿಧಾನಗತಿಯಲ್ಲಿ ಹೊರಹೊಮ್ಮುತ್ತದೆ, ಯಾವುದೇ ಇತರ ಚಕ್ರ ವೀಕ್ಷಿಸಿದಾಗ ಇಇಜಿ ಅಲೆಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ, ಶಕ್ತಿಯುತ ಅಣು ಕ್ಷಣಗಳಿಂದಾದ ಅಲೆ ವಿದ್ಯುತ್ ಅಯಸ್ಕಾಂತ ಬಲಕಾರಕ ಶಕ್ತಿ ಸಮಾಗಮಕ್ಕೆ ನಾಂದಿ, ಶ್ರೀಚಕ್ರದ ಮೂಲಕ ದಿವ್ಯ ಮಂತ್ರೋಚ್ಚಾರಗಳಿಂದಾದ ಶಬ್ಧ ಬ್ರಹ್ಮ ಶಕ್ತಿ ಇದನ್ನು ಸಾಧಿಸುತ್ತದೆಂದು ಭಾವಿಸಬಹುದು, ಒಂದು ದೃಷ್ಟಿಯಲ್ಲಿ ಆದಿ ಶಂಕರಾಚಾರ್ಯರನ್ನು ಕಣ ಭೌತ ಶಾಸ್ತ್ರದ ಪಿತಾಮಹ ಎನ್ನಬಹುದು. ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನೇ ನಿಗ್ರಹಿಸಿದರು, ಶ್ರೀ ಸೌಂದ...

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ ಅಂದರೆ .. ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು. ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು . ೧. ಉಚ್ಚಿಷ್ಟಮ್ - ಎಂದರೆ ಎಂಜಲು . ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ . ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ , ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು. ೨. ಶಿವನಿರ್ಮಾಲ್ಯಮ್ - ಎಂದರೆ ಶಿವನ ಜಟೆಯಿಂದ ಹೊರಗೆ ಬಂದ ಗಂಗೆ . ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು . ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ.  ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ.  ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು.  ಆದರೂ ಈ ಗಂಗೆಯು ಪವಿತ್ರ. ೩. ವಮನಮ್ - ಎಂದರೆ ವಾಂತಿ . ಜೇನುತುಪ್ಪ . ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು,  ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ.  ಅದೇ ಜೇನು ತುಪ್ಪ.  ಇದು ಜೇನುಹುಳುಗಳ ವಮನ. ಆದರೆ ಜೇನು...

ಶ್ರೀ ದಕ್ಷಿಣ ಕಾಳಿ ಮಹಾತ್ಮೆ

ಶ್ರೀ ದಕ್ಷಿಣ ಕಾಳಿ ಮಹಾತ್ಮೆ( ದಶಮಹಾ ವಿದ್ಯೆಯ ಮೊದಲ ಸಾಧನೆ) ದೇವಾದಿ ದೇವತೆಗಳೆಲ್ಲರೂ ಸೇರಿ ಕೈಲಾಸದಲ್ಲಿ ಪಾರ್ವತಿ ಪರಮೇಶ್ವರರನ್ನು ಸ್ತುತಿಸುತ್ತಿದ್ದರು. ತುಂಬುರು ನಾರದರು ವೀಣೆಯನ್ನು ನುಡಿಸುತ್ತಾ  ನಂದಿಯು ಮೃದಂಗ ವಾದ್ಯ ನುಡಿಸಿ ತಿಲೊತ ಮಾದಿಗಳು ನರ್ತನ ಮಾಡುತ್ತಾ ಸನಕಾದಿ ಋಷಿಗಳು ವೇದ ಮಂತ್ರ ಪಾರಾಯಣ ಮಾಡುತ್ತಾ ರಾಕ್ಷಸರು ಪರಶಿವನ ಮಂತ್ರವನ್ನು ಜಪಿಸುತ್ತ ಅಷ್ಟದಿಕ್ಪಾಲಕರು ಸ್ವಾಮಿಯ ಸೇವೆಯನ್ನು ಯಥೋಚಿತವಾಗಿ ಮಾಡುತ್ತಾ ಬೃಂಗಿ ರಿಟಾಧಿಗಳು ಸುಶ್ರಾವ್ಯವಾಗಿ ಸಾಮಗಾನ ಮಾಡುತ್ತಿದ್ದರು . ಅಂತಹ ವಿಜ್ರಂಭನೆ ನಡೆಯುತ್ತಿರುವಾಗ ಭೂಲೋಕದಿಂದ ಬಂದ ನಾರದರು ಕೈಲಾಸದಲ್ಲಿ ಶಿವನನ್ನು ಕಂಡು ವಂದಿಸಿದರು. ಶಿವನು ಅವರಿಗೆ ಅಘ್ಯಾದಿಗಳನ್ನು ಕೊಟ್ಟು ಆಸನದಲ್ಲಿ ಕೂರಿಸಿ ಸತ್ಕರಿಸಿದನು ಸಂತುಷ್ಟರಾದ ನಾರದರು ಪರಶಿವನನ್ನು ಕೊಂಡಾಡಿದರು ಅವರು ಸ್ವಲ್ಪ ಅಸಮಾಧಾನ ತೋರಿದ್ಂತಿದ್ದರು . ಆಗ ಶಿವನು ನಾರದನನ್ನು ಕುರಿತು ಬ್ರಹ್ಮರ್ಷಿಗಳೆ ತಾವು ಈ ರೀತಿ ಅಸಮಾಧಾನ ಪಟ್ಟಿರುವುದಕ್ಕೆ ಕಾರಣವೇನು ಎಂದು ಒತ್ತಾಯಿಸಿ ಕೇಳಿದನು. ಆಗ ನಾರದರು ಸ್ವಲ್ಪ ತಲೆ ಬಗ್ಗಿಸಿ ದೇವ ದೇವ ಪ್ರಪಂಚದಲ್ಲೆಲ್ಲಾ ಇನ್ನ ಕೀರ್ತಿ ಭಜನೆ ಆರಾಧನೆಗಳು ವಿಶೇಷವಾಗಿ ನಡೆಯುತ್ತಿದೆ ನಾನು ಕೂಡ ಅದನ್ನು ನೋಡಿ ತೃಪ್ತಿ ಪಟ್ಟೆನು. ಅಂತಹ ಸಮಯದಲ್ಲಿ ನಿಮ್ಮನ್ನೇ ದಿಕ್ಕರಿಸಿದ ಒಂದು ಅವಕಾಶವನ್ನು ನಾನು ನೋಡಿ ಬಂದೆನು ಎಂದು ಹೇಳಿ ತಲೆ ತಗ್ಗಿಸಿದರು. ಶಿವನು ಬಲತ್ಕಾರವಾಗಿ ನ...