ಅವಧೂತ ಲಕ್ಷಣಮ್
ಅವಧೂತ" ಅನ್ನುವ ಪದದ ಅರ್ಥ ನೋಡಿ ಎಷ್ಟು ಸುಂದರವಾದ ಜೋಡಣೆ!
'ಅವಧೂತ' ನಾಲ್ಕು ಅಕ್ಷರಗಳ ಜೋಡಣೆ
' ಅ ' ಕಾರ,
' ವ ' ಕಾರ,
'ಧೂ' ಕಾರ ಹಾಗೂ
' ತ ' ಕಾರಗಳಿಂದಾಗಿದೆ.
ಮೊದಲನೇಯ 'ಅ' ಕಾರಕ್ಕೆ,
ಆಶಾಪಾಶವಿನಿರ್ಮುಕ್ತ
ಆದಿಮಧ್ಯಾಂತನಿರ್ಮಲಃ/
ಆನಂದೇ ವರ್ತತೇ ನಿತ್ಯಂ
ಅಕಾರಂ ತಸ್ಯ ಲಕ್ಷಣಮ್//ಅ//
'ಅ' ಎಂಬ ಮೊದಲನೇ ಅಕ್ಷರಕ್ಕೆ, ಆಶಾಪಾಶಗಳಿಂದ ಪಾರಾದವನು, ಆದಿ, ಮಧ್ಯೆ ಮತ್ತು ಅಂತ್ಯದವರೆಗೂ ಪೂರ್ಣವಾಗಿ ನಿರ್ಮಲನಾದವನು, ನಿತ್ಯವೂ ಆನಂದದಲ್ಲಿ ತಲ್ಲೀನನಾಗಿರುವವನು ಎಂದು ಅರ್ಥ.
ಎರಡನೇಯ 'ವ' ಕಾರಕ್ಕೆ,
ವಾಸನಾ ವರ್ಜಿತಾ ಯೇನ
ವಕ್ತವ್ಯಂ ಚ ನಿರಾಮಯಮ್/
ವರ್ತಮಾನೇಷು ವರ್ತೇತ
ವಕಾರಂ ತಸ್ಯ ಲಕ್ಷಣಮ್//ವ//
'ವ' ಎಂಬ ಎರಡನೇಯ ಅಕ್ಷರಕ್ಕೆ, ವಾಸನೆಯಿಂದ ಪಾರಾದವನು,
ನಿರಾಮಯನು, ಅನವರತವೂ ವರ್ತಮಾನದಲ್ಲಿ ತಲ್ಲೀನನಾಗಿರುವವನು ಎಂದು ಅರ್ಥ.
ಮೂರನೇಯ 'ಧೂ' ಕಾರಕ್ಕೆ
ಧೂಲಿಧೂಸರಗಾತ್ರಾಣಿ
ಧೂತಚಿತ್ತೋ ನಿರಾಮಯಃ/
ಧಾರಣಾಧ್ಯಾನನಿರ್ಮುಕ್ತೋ
ಧೂಕಾರಸ್ತಸ್ಯ ಲಕ್ಷಣಮ್//ಧೂ//
'ಧೂ' ಎಂಬ ಮೂರನೇಯ ಅಕ್ಷರಕ್ಕೆ, ಅವನ ದೇಹ ಧೂಳಿನಿಂದ ತುಂಬಿದ್ದರೂ ಮನಸ್ಸು ಅಶುಚಿಯನ್ನೆಲ್ಲ ಕಳೆದುಕೊಂಡಿರುವುದು, ಧಾರಣ-ಧ್ಯಾನಗಳಿಂದ ನಿರ್ಮುಕ್ತನಾಗಿರುವವನು ಎಂದು ಅರ್ಥ.
ನಾಲ್ಕನೇಯ 'ತ' ಕಾರಕ್ಕೆ,
ತತ್ತ್ವಚಿಂತಾಧೃತಾಯೇನ
ಚಿಂತಾಚೇಷ್ಟಾವಿವರ್ಜಿತಃ
ತಮೋಹಂಕಾರನಿರ್ಮುಕ್ತಃ
ತಕಾರಸ್ತಸ್ಯ ಲಕ್ಷಣಮ್//ತ//
'ತ' ಎಂಬ ನಾಲ್ಕನೇಯ ಅಕ್ಷರಕ್ಕೆ, ತತ್ವಚಿಂತನೆಯನ್ನು ಮಾಡುವವನು, ಚಿಂತೆಯನ್ನು ಪ್ರವೃತ್ತಿಯನ್ನು ತೊರೆದವನು, ಅಜ್ಞಾನದ ಅಹಂಕಾರದಿಂದ ಪಾರಾದವನು ಎಂದು ಅರ್ಥ.
ಹೀಗೆ ಅವಧೂತರ ಎಲ್ಲ ಲಕ್ಷಣಗಳನ್ನೂ ಹೆಸರಲ್ಲೇ ಕಾಣುವುದು ವಿಸ್ಮಯವಲ್ಲವೇ?
Comments
Post a Comment