Skip to main content

ಗೋಪಾಷ್ಟಮಿ ಸಾಧು ಸಂತರ ಹತ್ಯೆ ಖಂಡನೀಯ

ಗೋಪಾಷ್ಟಮಿ

ನವಂಬರ್ 7,1966 ಅಂದು ಗೋಪಾಷ್ಟಮಿ

ಸಾವಿರಾರು ಹಿಂದೂ ಸಾಧು-ಸಂತರು ಗೋಹತ್ಯಾ ನಿಷೇಧ ಮಾಡಲು ಉಗ್ರ ಹೋರಾಟ ಮಾಡುತ್ತಾರೆ ಆದರೆ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಪ್ರತಿಭಟನಾಕಾರರ ಮೇಲೆ ಫೈರಿಂಗ್ ಆರ್ಡರ್ ಮಾಡುತ್ತಾರೆ ಪೊಲೀಸರ ಗುಂಡಗಳು ಸಿಡಿಯ ತೊಡಗಿದಾಗ ಅಲ್ಲಿದ್ದ ಹಿಂದುಗಳು ಸಾದು ಸಂತರು ದಿಕ್ಕುಪಾಲಾಗಿ ಓಡತೊಡಗಿದರು ಗಂಡೆದೆ ಕೊಟ್ಟು ಅಲ್ಲೇ ನಿಂತ ಹಲವಾರು ಸಾಧುಸಂತರು ಗುಂಡೇಟಿಗೆ ಬಲಿಯಾದರು

ಅದೇ ಸಮಯದಲ್ಲಿ ಕೃಪಾರ್ಥಿ ಮಹಾರಾಜರಿಗೆ ಗುಂಡೇಟು ಬಿತ್ತು ನೆಲಕ್ಕುರುಳಿದ ಕೃಪಾರ್ಥಿ ಮಹಾರಾಜರ ಬಿದ್ದಲ್ಲಿ ತಡವರಿಸಿಕೊಂಡು  ನಾವು ಭಿಕ್ಷೆ ಕೊಟ್ಟ ಆಸ್ಥಾನದಲ್ಲಿ

ಕೂತಿರುವವರೇ ಈ ದೇಶನಾ ನಿಮ್ಮ ಅಪ್ಪಂದಿರ ಆಸ್ಥಿ

ಅಂತ ಅಂದುಕೊಂಡಿದ್ದೀರಾ,ನೀವು ನನ್ನೆದೆಗೆ

ಗುಂಡಿಕ್ಕಿದ್ರೆ,ನಮ್ಮೆಲ್ಲಾ ಸಂತರನ್ನು ಕೊಲ್ಲುವುದಕ್ಕೆ ನೋಡಿದಿರಿ,

ನಾನು ಸಾಯುತ್ತೇನೆ, ನನ್ನ ರಕ್ತ ಈ ದೇಶದ ಮಣ್ಣಿಗೆ

ಸೇರುತ್ತಿದೆ, ಆದರೂ ಕೂಡ ನಾವೆಲ್ಲಾ ಸಂತರು ನಮಗೆ

ಮಾಡಿರುವ ದ್ರೋಹಕ್ಕೆ ಕ್ಷಮಿಸುತ್ತೇವೆ.

ಆದರೆ ಆ ಗುಂಡುಗಳು ಗೋ ಮಾತೆಗೂ ತಾಕ್ತಲ್ಲ, ಈ

ಒಂದು ಪುಣ್ಯ ಭೂಮಿಯಲ್ಲಿ ಸಾಧುವಿನ ಎದರುಗಡೆ,

ಗೋ ಮಾತೆ ಒದ್ದಾಡಿ, ಒದ್ದಾಡಿ ಸತ್ತವಲ್ಲ, ಆ

ಗೋ ಮಾತೆಯ ಶಾಪ ನಿಮ್ಮನ್ನ ಬಿಡಲ್ಲ, ನಿಮ್ಮ

ಇಡೀ ವಂಶ ಗೋಪಾಷ್ಟಮಿ ದಿನ ನಾಶವಾಗುತ್ತೆ,

ಎನ್ನುತ್ತಾ ನೆಲಕ್ಕುರುಳುತ್ತಾರೆ.

ಅದು ಸಹಜವೊ ಅಥವಾ ಆ ಮಹಾ ಸಾಧುವಿನ ಶಾಪವೋ ಕಾಕತಾಳಿಯವೋ

ಆನಂತರ ನಡೆದದ್ದು ಇತಿಹಾಸ

ಹಿಂದೂ ಮಹಾ ಸಂತರನ್ನು ಸ್ಮರಿಸುತ್ತ

ಗೋಪಾಷ್ಟಮಿ

ವಂದೇ ಗೋ ಮಾತರಂ

ಜಯಜಯತು ಹಿಂದೂ ರಾಷ್ಟ್ರ

ಕೆಳಗಿನ ವಿಡಿಯೋ ನೋಡಿ⤵️



Comments

Popular posts from this blog

ಶ್ರೀ ಚಕ್ರ ಮತ್ತು ಅದರ ಮಹಿಮೆ

ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ, ಶ್ರೀಚಕ್ರದ ಮೇಲೆ ಇಟ್ಟ ದೃಷ್ಟಿ ನರಮಂಡಲದಲ್ಲಿ ಉಂಟಾಗುವ ಕಂಪನ ಇಇಜಿಯಲ್ಲಿ (ಎಲೆಕ್ಟ್ರೋ ಎನ್ ಕೆಫಲೋಗ್ರಾಫ್) ಆಲ್ಫಾ ಅಲೆ ಹೊರಡಿಸುತ್ತದೆ. ಧ್ಯಾನ ಸ್ಥಿತಿಯಲ್ಲೂ ಈ ಅಲೆ ನಿಧಾನಗತಿಯಲ್ಲಿ ಹೊರಹೊಮ್ಮುತ್ತದೆ, ಯಾವುದೇ ಇತರ ಚಕ್ರ ವೀಕ್ಷಿಸಿದಾಗ ಇಇಜಿ ಅಲೆಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ, ಶಕ್ತಿಯುತ ಅಣು ಕ್ಷಣಗಳಿಂದಾದ ಅಲೆ ವಿದ್ಯುತ್ ಅಯಸ್ಕಾಂತ ಬಲಕಾರಕ ಶಕ್ತಿ ಸಮಾಗಮಕ್ಕೆ ನಾಂದಿ, ಶ್ರೀಚಕ್ರದ ಮೂಲಕ ದಿವ್ಯ ಮಂತ್ರೋಚ್ಚಾರಗಳಿಂದಾದ ಶಬ್ಧ ಬ್ರಹ್ಮ ಶಕ್ತಿ ಇದನ್ನು ಸಾಧಿಸುತ್ತದೆಂದು ಭಾವಿಸಬಹುದು, ಒಂದು ದೃಷ್ಟಿಯಲ್ಲಿ ಆದಿ ಶಂಕರಾಚಾರ್ಯರನ್ನು ಕಣ ಭೌತ ಶಾಸ್ತ್ರದ ಪಿತಾಮಹ ಎನ್ನಬಹುದು. ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನೇ ನಿಗ್ರಹಿಸಿದರು, ಶ್ರೀ ಸೌಂದ...

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ

ಉಚ್ಚಿಷ್ಟಮ್ ಶಿವನಿರ್ಮಾಲ್ಯಂ ವಮನಮ್ ಶವಕರ್ಪಟಮ್ ಕಾಕವಿಷ್ಠಾಸಮುತ್ಪನ್ನಮ್ ಪಂಚೈತೇತಿಪವಿತ್ರಕಾಃ ಅಂದರೆ .. ಎಂಜಲು, ಶಿವನ ನಿರ್ಮಾಲ್ಯ, ವಾಂತಿ, ಹೆಣದ ಬಟ್ಟೆ, ಕಾಗೆಯ ಮಲದಿಂದ ಹುಟ್ಟಿದ್ದು. ಈ ಐದು ಅತ್ಯಂತ ಪವಿತ್ರವಾದವುಗಳು...!! ಎಂದು . ೧. ಉಚ್ಚಿಷ್ಟಮ್ - ಎಂದರೆ ಎಂಜಲು . ಹಾಲು ಕರುವಿನ ಎಂಜಲು. ಹಸುವಿನ ಹಾಲನ್ನು ಕರು ಕುಡಿದು ಹಾಗೇ ಬಿಟ್ಟಿರುತ್ತದೆ . ಆ ಎಂಜಲು ಹಾಲನ್ನೇ ನಾವು ಉಪಯೋಗಿಸುತ್ತೇವೆ. ಕರುವಿನಿಂದ ಎಂಜಲಾದ ಹಾಲು ದೇವರಿಗೆ , ಪಂಚಾಮೃತಾಭಿಷೇಕಕ್ಕೆ ಬೇಕಾದ ಅತ್ಯಂತ ಪವಿತ್ರ ವಸ್ತು. ೨. ಶಿವನಿರ್ಮಾಲ್ಯಮ್ - ಎಂದರೆ ಶಿವನ ಜಟೆಯಿಂದ ಹೊರಗೆ ಬಂದ ಗಂಗೆ . ಗಂಗಾ ನದಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವಾಗ ಅಹಂಕಾರದಿಂದ ಬರುತ್ತಿದ್ದಳು . ಆಗ ಗಂಗೆಯ ಗರ್ವವನ್ನು ದಮನ ಮಾಡುವುದಕ್ಕಾಗಿ ಪರಶಿವನು ಆ ಗಂಗೆಯನ್ನು ತನ್ನ ಜಟೆಯ ಮಧ್ಯೆ ಕಟ್ಟಿಹಾಕಿಬಿಟ್ಟ.  ಅನಂತರ ಆ ಜಟೆಯಿ೦ದ ಗಂಗಾನದಿಯನ್ನು ಹೊರಕೆ ಹಾಕಿದ.  ಶಿವನ ಜಟೆಯಲ್ಲಿದ್ದು ಅಲ್ಲಿಂದ ಮುಕ್ತಳಾದ್ದರಿಂದ ಗಂಗಾನದಿಯು ಶಿವನ ನಿರ್ಮಾಲ್ಯವಾಯಿತು.  ಆದರೂ ಈ ಗಂಗೆಯು ಪವಿತ್ರ. ೩. ವಮನಮ್ - ಎಂದರೆ ವಾಂತಿ . ಜೇನುತುಪ್ಪ . ಜೇನುಹುಳುಗಳು ಬೇರೆಬೇರೆಯ ಗಿಡಮರಗಳಿಂದ ಮಕರಂದವನ್ನು ಬಾಯಲ್ಲಿ ಹಿಡಿದು ತಂದು,  ಬಾಯಿಂದಲೇ ಆ ಮಕರಂದವನ್ನು ಗೂಡಿನಲ್ಲಿ ಇಟ್ಟಿರುತ್ತವೆ.  ಅದೇ ಜೇನು ತುಪ್ಪ.  ಇದು ಜೇನುಹುಳುಗಳ ವಮನ. ಆದರೆ ಜೇನು...

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು? ಏಕೆ?

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು?  ಏಕೆ? ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು. ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ| ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:|| ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ. ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು  ?  ಏಕೆ? ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇ...