ತಂದೆ, ತಾಯಿ, ಸ್ನೇಹಿತ, ಅಣ್ಣ, ತಮ್ಮ ಎಲ್ಲರೂ ಸಂಸಾರಕ್ಕೆ ಕಾರಣರು. ಗುರುಗಳೊಬ್ಬರೇ ಸಂಸಾರದಿಂದ ಉದ್ಧಾರ ಮಾಡಲು ಸಮರ್ಥರು. ಆ ಕಾರಣ ಗುರುವೇ ನಮ್ಮಿಂದ ಪೂಜಿಸಲು ಅರ್ಹ’ (ಪಿತಾ ಮಾತಾ ಸುಹೃತ್ ಭ್ರಾತಾ ಸರ್ವೆ ಸಂಸಾರಹೇತವಃ | ಗುರುರೇಕಃ ಸದಾ ಸೇವ್ಯಃ ಸಂಸಾರೋದ್ಧಾರಣಕ್ಷಮಃ ||).
ಈ ಮಾತು ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಇರುವ ಮಹತ್ತ್ವವನ್ನು ತೋರಿಸುತ್ತದೆ. ಉಳಿದವರು ಮಾಡುವ ಉಪಕಾರ ಈ ದೇಹಕ್ಕೆ ಮಾತ್ರ ಸಂಬಂಧಪಟ್ಟದ್ದು. ಆದರೆ ಗುರುಗಳು ಮಾಡುವ ಉಪಕಾರ ಜನ್ಮಜನ್ಮಾಂತರಕ್ಕೂ, ಮೋಕ್ಷಕ್ಕೂ ಸಂಬಂಧಪಡುವ ಉಪಕಾರ.
ಒಂದು ದಿನ ಅಲೆಗ್ಸಾಂಡರ್ ಮಹಾರಾಜನು ದಾರಿಯಲ್ಲಿ ನಡೆದುಹೋಗುತ್ತಿದ್ದಾನೆ. ಮಧ್ಯದಲ್ಲಿ ಆತನ ಗುರು ಅರಿಸ್ಟಾಟಲ್ನ ಭೇಟಿ ಆಗುತ್ತದೆ. ತಕ್ಷಣವೇ ಅಜೇಯ ದೊರೆ ಅಲೆಗ್ಸಾಂಡರನು ಮಂಡಿಯೂರಿ ತಲೆ ಬಾಗಿದಾಗ ಜನರು ಬೆರಗಾದರು. ರಾಜನ ವಂದನೆಯನ್ನು ಸ್ವೀಕರಿಸಿದ ಗುರು ಅರಿಸ್ಟಾಟಲ್ ಒಂದೂ ಮಾತನಾಡದೆ ಹೊರಟುಹೋದರು. ಆ ಬಳಿಕ ರಾಜನಿಗೆ ಮಂತ್ರಿ ಕೇಳಿದ, ‘ಮಹಾಪ್ರಭು! ತಾವು ಅಜೇಯ ವೀರರು. ನಿಮ್ಮ ತಂದೆ ನಿಮಗೆ ಸುಂದರ ದೇಹವನ್ನಿತ್ತು ಯುದ್ಧಕಲೆಯನ್ನು ಕಲಿಸಿ ಬೆಳೆಸಿ, ಸಮಸ್ತ ಐಶ್ವರ್ಯಗಳನ್ನು ಕೊಟ್ಟು ನಿಮ್ಮನ್ನು ಏಕಛತ್ರಾಧಿಪತಿಗಳನ್ನಾಗಿ ಮಾಡಿದ್ದಾರೆ. ಅಂತಹ ತಂದೆಗಿಂತ ಹೆಚ್ಚಿನ ಗೌರವವನ್ನು ಆ ಭಿಕ್ಷು
![]() |
| ಅವದೂತ ನಾದಾನಂದ ಗುರುಗಳು |
ಕವೇಷದ ಬಡ ಗುರುವಿಗೆ ಕೊಡುತ್ತಿರುವಿರಿ. ಏಕೆ?’ ಆಗ ಅಲೆಗ್ಸಾಂಡರ್, ‘ಮಂತ್ರಿಗಳೆ! ನಮ್ಮ ತಂದೆ ನನ್ನನ್ನು ಮೇಲಿನಿಂದ ಭೂಮಿಗೆ ತಂದರು. ಆದರೆ ಗುರುವು ನನ್ನನ್ನು ಈ ಭೂಮಿಯಿಂದ ಮೇಲೆ ಅಂದರೆ ಭಗವಂತನೆಡೆಗೆ ಕರೆದುಕೊಂಡು ಹೋಗುತ್ತಾರೆ. ನನ್ನ ತಂದೆ ನನಗೆ ನಾಶವಾಗುವ ದೇಹವನ್ನು, ಸಂಪತ್ತನ್ನು ಕೊಟ್ಟರು. ಆದರೆ ನನ್ನ ಗುರುವು ನನಗೆ ಅಮರ ಸಿರಿಯನ್ನು, ದಿವ್ಯ ಜೀವನವನ್ನು ಕರುಣಿಸಿದ್ದಾರೆ. ಅಂತಹ ಮಹಾಗುರುವನ್ನು ನಾನು ಹಾಗೆ ಗೌರವಿಸದೆ ಇರಬಹುದೆ?’ ಎಂದ.
ತಂದೆ-ತಾಯಿ ನಮಗೆ ಲೌಕಿಕ ಸಂಪತ್ತನ್ನು ಕೊಡಬಹುದು. ಆದರೆ ಮೋಕ್ಷಕ್ಕೆ ಕರೆದೊಯ್ಯಲಾರರು. ಉತ್ತಮ ತತ್ವಜ್ಞಾನ ಕೊಟ್ಟು, ಮೋಕ್ಷ ಕೊಡಿಸಿ, ಶಾಶ್ವತವಾಗಿ ಸುಖಿಗಳಾಗಿರುವಂತೆ ಮಾಡುವ ಸಾಮರ್ಥ್ಯ ಗುರುಗಳಿಗೆ ಮಾತ್ರ ಇರುವಂತಹದ್ದು. ಹೀಗೆ ಗುರುಗಳು ನಮ್ಮ ಜೀವನದಲ್ಲಿ ಪ್ರಧಾನ ಸ್ಥಾನ ಪಡೆದಿದ್ದಾರೆ.


ಗುರುವೇ ಸರ್ವಸ್ವ ಎನ್ನುವುದನ್ನು ಬಿಂಬಿಸಿದೆ
ReplyDelete