ಶ್ರದ್ಧಾ ಜ್ಞಾನಂ ದದಾತಿ "ಶ್ರದ್ಧಾ ಜ್ಞಾನಂ ದದಾತಿ"ಅಂದರೆ,ಶ್ರದ್ಧೆ ಜ್ಞಾನವನ್ನು ಕೊಡುತ್ತದೆ.ನಿಜ.. ಜ್ಞಾನ ಬೇಕೆಂದರೆ ಶ್ರದ್ಧೆ ಹಾಗೂ ಏಕಾಗ್ರತೆ ಇರಲೇಬೇಕು."ಶ್ರದ್ಧಾವಾನ್ ಲಭತೇ ಜ್ಞಾನಮ್"ಶ್ರದ್ಧಾವಂತರು ಮಾತ್ರ ಜ್ಞಾನದಲ್ಲಿ ಪರಿಪೂರ್ಣತೆಯನ್ನು ಹೊಂದುತ್ತಾರೆ. ಹಾಗೇ ಜ್ಞಾನದ ಮೂಲಕ ಪರಮಶಾಂತಿಯನ್ನು ಗಳಿಸುತ್ತಾರೆ."ಜ್ಞಾನಂ ಲಬ್ಧ್ವಾ ಪರಾಶಾಂತಿಂ ಅಚಿರೇಣಾಧಿಗಚ್ಛತಿ"ಪ್ರಪಂಚದಲ್ಲಿರುವ ಸಕಲ ಚರಾಚರಗಳ ಅಸ್ತಿತ್ವವಿರುವುದು ಶ್ರದ್ಧೆಯಲ್ಲೇ.ಋಗ್ವೇದದ ಶ್ರದ್ಧಾಸೂಕ್ತ ಶ್ರದ್ಧೆಯ ಮಹತ್ವವನ್ನು ಸುಂದರವಾಗಿ ತಿಳಿಸುತ್ತದೆ. ಪಂಚಭೂತಗಳ ಇರುವಿಕೆಯಿರುವುದು ಶ್ರದ್ಧೆಯಲ್ಲೇ,"ಶ್ರದ್ಧಯಾಗ್ನಿಃ ಸಮಿಧ್ಯತೇ ಶ್ರದ್ಧಯಾ ವಿಂದತೇ ಹವಿಃ" ಅಗ್ನಿ ಉರಿಯುವುದು ಶ್ರದ್ಧೆಯಿಂದ.ಅಗ್ನಿಗೆ ಹವಿಸ್ಸನ್ನು ಅರ್ಪಿಸುವುದು ಶ್ರದ್ಧೆಯಿಂದ,ಸೂರ್ಯ,ಚಂದ್ರರು ಬೆಳಕನ್ನು ನೀಡುವುದು ಶ್ರದ್ಧೆಯಿಂದ.ಆಗಸ ಮಳೆ ಸುರಿಸುವುದು ಶ್ರದ್ಧೆಯಿಂದ.ದಾನ-ಧರ್ಮಗಳನ್ನು ಮಾಡಬೇಕಾದ್ದೂ ಶ್ರದ್ಧೆಯಿಂದ.ಯಾರು ಪರಿಪೂರ್ಣ ಶ್ರದ್ಧೆಯಿಂದ ತನ್ನ ಕಾರ್ಯವನ್ನು ಮಾಡುತ್ತಾರೋ ಅಂತವರಿಗೆ ಕಾರ್ಯಫಲ ಸಿದ್ಧಿಯಾಗುತ್ತದೆ. ಜ್ಞಾನ ಸುಲಭವಾಗಿ ಗಳಿಸುವಂತದ್ದಲ್ಲ.ಹಣದಿಂದ ಖರೀದಿಸಲು ಸಾಧ್ಯವಾಗುವಂತದ್ದಲ್ಲ.ಜ್ಞಾನವನ್ನು ಗಳಿಸಬೇಕೆಂದರೆ ಒಬ್ಬ ಯೋಗ್ಯ ಗುರುವನ್ನು ಆಯ್ಕೆ ಮಾಡಿಕೊಳ್ಳಬೇಕು."ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ".ಶ್...
ಏನು ಮನುಷ್ಯ ಜನ್ಮದ ಉದ್ದೇಶ ? ನದಿಯೆಲ್ಲೇ ಹುಟ್ಟಲಿ ಕೊನೆಗೆ ಸೇರುವುದು ಸಾಗರವನ್ನೇ.ಮನುಷ್ಯನೆಷ್ಟೇ ದೊಡ್ಡವನಾಗಿರಲಿ ಕೊನೆಗೆ ಸೇರುವುದು ಮಸಣವನ್ನೇ..!! ಜಾತಸ್ಯ ಹಿ ಧ್ರುವೋ ಮೃತ್ಯುಃ.ಹುಟ್ಟಿದ ಕೂಡಲೇ ಸಾವು ನಿಶ್ಚಯ.ಮೃತ್ಯು ಯಾರನ್ನು ಕೇಳಿ,ಅಂಗಲಾಚಿ ಬರುವುದಿಲ್ಲ.ಸಾವಿರದ ಮನೆಯ ಸಾಸಿವೆಯೇ ಇಲ್ಲ.ಆದರೂ ಎಂತಹ ಮೂಢರು ನಾವು.ಸಾವನ್ನೇ ಮರೆತು,ಪ್ರಪಂಚದ ವೈಭೋಗದಲ್ಲಿ ಮನುಷ್ಯ ಜನ್ಮದ ಉದ್ದೇಶವನ್ನೇ ಮರೆತು ಜೀವಿಸುತ್ತಿದ್ದೇವೆ..!! ಪುನರ್ಜನ್ಮವನ್ನು ನಂಬುವವರು ನಾವು.ಹಾಗಾಗಿ ಎಲ್ಲ ಜನ್ಮಗಳಲ್ಲೂ ಮನುಷ್ಯಜನ್ಮವೇ ಶ್ರೇಷ್ಟ.”ಜಂತೂನಾಂ ನರಜನ್ಮ ದುರ್ಲಭಮ್”.ಈ ಮನುಷ್ಯ ಜನ್ಮ ಬಹಳ ಸುಲಭವಾಗಿ ಸಿಕ್ಕಿದ್ದಲ್ಲ ಸ್ವಾಮೀ. ಹಲವಾರು ಜನ್ಮಗಳ ಪುಣ್ಯದ ಫಲ. ಭಗವಂತ ಮನುಷ್ಯನಿಗಷ್ಟೇ ವಿಶೇಷವಾದ ಜ್ಞಾನವನ್ನು ಕೊಟ್ಟ.ಜಗತ್ತಿನ ಸಕಲ ಚರಾಚರಗಳನ್ನು ನಿರ್ವಹಿಸುವ ದೊಡ್ಡ ಜವಾಬ್ದಾರಿ ಕೊಟ್ಟ.ಆದರೆ ಆ ಜವಾಬ್ದಾರಿಯನ್ನು ನಾವು ಸರಿಯಾಗಿ ನಿರ್ವಹಿಸುತ್ತಿದ್ದೇವಾ..?ಪ್ರಾಣಿಗಳೂ ಕಚ್ಚಾಡುತ್ತವೆ.ಹಾಗೇ ನಾವೂ ಕಚ್ಚಾಡುತ್ತಿದ್ದೇವೆ.ಅಂದಮೇಲೆ ಮನುಷ್ಯನಿಗೂ,ಪ್ರಾಣಿಗಳಿಗೂ ಏನು ವ್ಯತ್ಯಾಸ..? ಹಾಗಾದರೆ,ಮನುಷ್ಯಜನ್ಮದ ಉದ್ದೇಶ..?ಸುಖೋಪಭೋಗವೇ...?ಕೇವಲ ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇವೆಯೇ..?ತಿಂದುಂಡು ಮಜಾ ಮಾಡಿ,ಯಾರಿಗೂ ಕೊಡದೇ ಶೇಖರಿಸಿ ಕೊನೆಗೆ ಬರಿಗೈಯ್ಯಲ್ಲಿ ನಡೆಯುವುದೇ..? ಖಂಡಿತಾ ಅಲ್ಲ.. ಮನುಷ್ಯಜನ್ಮ ಸಾರ್ಥಕ್ಯವನ್ನು ಪಡೆಯಬೇಕು..ಅದಕ್ಕೇನು ಮಾಡಬೇ...